ಅಭಿಪ್ರಾಯ / ಸಲಹೆಗಳು

ನಮ್ಮ ಆಕರ್ಷಕ ವಸತಿ ಶಾಲೆ

        ಪ್ರತಿಭೆಗೆ ಪುರಸ್ಕಾರ ಎನ್ನುವ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾಗಿರುವ ವಸತಿ ಶಾಲೆಗಳು ದೇಶದ ಉತ್ತಮ ಪ್ರಜೆಯನ್ನು, ಹೊರ ಹೊಮ್ಮಿಸುವ ಟಂಕಶಾಲೆಗಳಂತಿವೆ. ವಸತಿ ಶಾಲೆಯತ್ತ ಮಕ್ಕಳನ್ನು ಸೆಳೆಯುವಂತಾಗಲು ಅದರ ಭೌತಿಕ ಪರಿಸರ ಆಕಷ೯ಕವಾಗಿರಬೇಕು. ಉತ್ತಮವಾದ ಶಾಲಾಕಟ್ಟಡ, ಶಾಲಾಸಂಕೀಣ೯, ಕೈತೋಟ, ಶುದ್ಧ ಕುಡಿಯುವ ನೀರು, ಒಳ್ಳೆಯ ವಸತಿ ವ್ಯವಸ್ಥೆ, ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹಗಲಿರುಳೆನ್ನದೆ ಕಾಯಕದಲ್ಲಿ ನಿರತರಾಗಿರುವ ಆದಶ೯ ಶಿಕ್ಷಕರು, ಶಾಲೆಯನ್ನು ಒಂದು ಸುಂದರವಾದ ಕೇಂದ್ರಬಿಂದುವಾಗಲು ಪೂರಕವಾಗುತ್ತವೆ.

       ವಿವಿಧ  ಪ್ರಾದೇಶಿಕ, ಆಥಿ೯ಕ, ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯಿಂದ ಬರುವ ಮಕ್ಕಳ ಬಾಳಿಗೆ ಭರವಸೆಯನ್ನು ತುಂಬುವಂತೆ ಇರುವ ಶಾಲೆ ಸ್ಫೂತಿ೯ಯ ಸೆಲೆಯಾಗಿರಬೇಕು. ಮಕ್ಕಳು ಕೋಮಲಹೂಗಳಂತಿದ್ದು, ಅವುಗಳು ಬಾಡದಂತೆ, ಚಿವುಟದಂತೆ ರಕ್ಷಿಸಬೇಕು. ತಂದೆ-ತಾಯಿಯನ್ನು ದೂರದ ಊರಿನಲ್ಲಿ ತೊರೆದು ಬಂದ ಮಕ್ಕಳಿಗೆ ಶಾಲೆಯೇ ತಮ್ಮ ಮನೆಯಂತೆ ಕಾಣಬೇಕು. ಸದಾ ಮಕ್ಕಳ ಹಿತ ಕಾಪಾಡುವ, ಅವರ ನೋವು ನಲಿವುಗಳಲ್ಲಿ ಭಾಗಿಯಾಗುವ ತಂದೆ-ತಾಯಿಯ ಸ್ವರೂಪದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ನಿಲಯಪಾಲಕರಿರಬೇಕು. ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಅವರ ವೈಯಕ್ತಿಕ ಆರೋಗ್ಯದ ಬಗ್ಗೆ, ವಸತಿ ಮತ್ತು ಊಟದ ಬಗ್ಗೆ ಕಳಕಳಿ ಹೊಂದಿರಬೇಕು. ಮಕ್ಕಳ ಓದು ಬರಹ ಅವರ ನಡೆ ನುಡಿಗಳ ಬಗ್ಗೆ ನಿರಂತರ ಜಾಗ್ರತೆ ವಹಿಸಬೇಕು. ಮಕ್ಕಳನ್ನು ಮಮತೆಯಿಂದ ಕಂಡು ಅವರ ಕುಂದು ಕೊರತೆಯನ್ನು ಆಲಿಸಿ ಸೂಕ್ತಪರಿಹಾರವನ್ನು ಶೀಘ್ರದಲ್ಲಿ ನೀಡಬೇಕು. ದಿನದ 24 ಗಂಟೆಗಳ ಕಾಲ ಮಕ್ಕಳು, ಶಿಕ್ಷಕರು ಹಾಗೂ ಪ್ರಾಂಶುಪಾಲರು ಒಂದೇ ಸೂರಿನಡಿಯಲ್ಲಿರುವುದರಿಂದ ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗಿ, ಸೂಕ್ತ ಮಾಗ೯ದಶ೯ನ ನೀಡುವುದರ ಜೊತೆಗೆ, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಶಾಲೆಯಲ್ಲಿ ನಿರಂತರವಾಗಿ ಕಲಿಕಾಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಲ್ಲಿ ದೇಶಭಕ್ತಿಯನ್ನು ತುಂಬಿ, ಸ್ವಾವಲಂಬಿಗಳಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸತ್ಪ್ರಜೆಗಳಾಗಬೇಕು.

ಇತ್ತೀಚಿನ ನವೀಕರಣ​ : 30-03-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080