ಅಭಿಪ್ರಾಯ / ಸಲಹೆಗಳು

ಶಾಲೆಗಳ ಬಗ್ಗೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

  • ರಾಜ್ಯದಲ್ಲಿ ವಿವಿಧ ವರ್ಗಗಳ ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ & ಎಲ್ಲಾ ವರ್ಗಗಳ ವಸತಿ ಶಾಲೆಗಳನ್ನು ಒಂದೇ ಸಂಸ್ಥೆಯ ಕಾರ್ಯವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ದಿನಾಂಕ10.1999 ರಲ್ಲಿ ಸರ್ಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ’ವನ್ನು ಪ್ರಾರಂಭಿಸಲಾಗಿದೆ.

ಉದ್ದೇಶಗಳು

  • ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ  ಗುಣಮಟ್ಟದ ವಿದ್ಯಾಭ್ಯಾಸ  ನೀಡಲು ಶಿಕ್ಷಕರುಗಳಿಗೆ ಅಧ್ಯಯನ ಕೋರ್ಸುಗಳನ್ನು, ಸಮ್ಮೇಳನಗಳನ್ನು, ಉಪನ್ಯಾಸಗಳನ್ನು, ಕಾರ್ಯಗಾರಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ನಡೆಸುವುದು.
  • ಸಂಘದ ಮತ್ತು ವಸತಿ ಶಾಲೆಗಳ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಿರುವ ಸಮಿತಿಗಳನ್ನು ರಚಿಸುವುದು.
  • ವಸತಿ ಶಾಲೆಗಳಿಗೆ ಅಗತ್ಯವಿರುವ ಶಾಲಾ ಸಂಕೀರ್ಣಗಳನ್ನು ನಿರ್ಮಿಸುವುದು ಮತ್ತು ಅವುಗಳ ನಿರ್ವಹಣೆ.
  • ಸರ್ಕಾರದಿಂದ ಗ್ರಾಮೀಣಾ ಭಾಗದಾ ಆರ್ಥಿಕವಾಗಿ ಹಿಂದುಳಿದ ಪ.ಜಾತಿ / ಪ.ವರ್ಗ  ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಆಂಗ್ಲ ಮಾದ್ಯಮದಲ್ಲಿ ನೀಡುವ ಉದ್ದೇಶದಿಂದ ಮಂಜೂರಾದ ವಸತಿ ಶಾಲೆಗಳ ನಿರ್ವಹಣೆ.

  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾಯ೯ನಿವ೯ಹಿಸುತ್ತಿರುವ ವಸತಿ ಶಾಲೆಗಳ ವಿವರ

  •      ಮೊರಾರ್ಜಿ ದೇಸಾಯಿ/ ಶ್ರೀಮತಿ. ಇಂದಿರಾಗಾಂಧಿಡಾ|| ಬಿ.ಆರ್. ಅಂಬೇಡ್ಕರ್ /ನಾರಾಯಣ ಗುರು/ ಹುತಾತ್ಮರ ವಸತಿ ಶಾಲೆಗಳು 

             ಈ ವಸತಿ ಶಾಲೆಗಳು ಸಹ ಶಿಕ್ಷಣ(Co-education)ದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿವೆ.   ಪ್ರತಿ ತರಗತಿಗೆ 50 ವಿದ್ಯಾರ್ಥಿಗಳಂತೆ ಪ್ರತಿ ಶಾಲೆಗೆ ವಿದ್ಯಾರ್ಥಿಗಳ ಒಟ್ಟು ಮಂಜೂರಾತಿ ಸಂಖ್ಯೆಯು 250 ಆಗಿರುತ್ತದೆ.ಬಾಲಕಿಯರಿಗೆ ಶೇ.50ರಷ್ಟು ಸ್ಥಾನಗಳನ್ನು ಕಲ್ಪಿಸಲಾಗಿದೆ.

  • ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು /ಡಾ|| ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗಳು 

             ಈ ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲೀಷ್ ಮಾಧ್ಯಮದಲ್ಲಿ ಬಾಲಕಿಯರಿಗಾಗಿ ಮಾತ್ರ ವ್ಯಾಸಂಗ ಕಲ್ಪಿಸಿದೆ, ಪ್ರತಿ ತರಗತಿಗೆ 50 ವಿದ್ಯಾರ್ಥಿನಿಯರಂತೆ, ಒಟ್ಟು  250 ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ ಇರುತ್ತದೆ

  • ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳು 

            ಈ ವಸತಿ ಶಾಲೆಗಳು ಸಹ ಶಿಕ್ಷಣ(Co-education)ದಲ್ಲಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿವೆ.  ಪ್ರತಿ ತರಗತಿಗೆ 80 ವಿದ್ಯಾರ್ಥಿಗಳಂತೆ (40 ವಿದ್ಯಾರ್ಥಿಗಳಂತೆ 2 ತರಗತಿ) ಒಟ್ಟು ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆಯು 560 ಆಗಿರುತ್ತದೆ.

  • ಏಕಲವ್ಯ ಮಾದರಿ ವಸತಿ ಶಾಲೆಗಳು   

ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಕೇಂದ್ರ ಸರ್ಕಾರದ ಪರಿಶಿಷ್ಟ ಬುಡಕಟ್ಟು ಮಂತ್ರಾಲಯದವತಿಯಿಂದ (Ministry of Tribal Affairs) ಮಂಜೂರಾಗಿದ್ದು, ಈ ವಸತಿ ಶಾಲೆಗಳ ನಿರ್ವಹಣೆ ಮತ್ತು ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತಿದೆ.  ಪ್ರಸ್ತುತ 12 ಏಕಲವ್ಯ ವಸತಿ ಶಾಲೆಗಳು ಮಂಜೂರಾಗಿದ್ದು, 10 ವಸತಿ ಶಾಲೆಗಳು ಪ್ರಾರಂಭವಾಗಿವೆ.  ಇನ್ನೂ 2 ವಸತಿ ಶಾಲೆಗಳ ಕಾಮಗಾರಿ ಪೂರ್ಣಗೊಳಿಸಿ ನಂತರ ಪ್ರಾರಂಭಿಸಲಾಗುವುದು.  ವಸತಿ ಶಾಲೆಗಳು ಸಹ ಶಿಕ್ಷಣ (Co-education)ದಲ್ಲಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿವೆ.  ಪ್ರತಿ ತರಗತಿಗೆ 60 ವಿದ್ಯಾರ್ಥಿಗಳಂತೆ ಒಟ್ಟು ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆಯು 420 ಆಗಿರುತ್ತದೆಇದರಲ್ಲಿ ಬಾಲಕ/ಬಾಲಕಿಯರಿಗೆ ಶೇ.50ರಷ್ಟು ಸ್ಥಾನಗಳನ್ನು ಕಲ್ಪಿಸಲಾಗಿದೆ

 

ಇತ್ತೀಚಿನ ನವೀಕರಣ​ : 23-06-2023 12:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080